ಬಡವರ ಬಂದು ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ

ಬಡವರ ಬಂದು ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ

ಬಡವರ ಬಂಧು ಯೋಜನೆ ಅನುದಾನ ಮೊತ್ತ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೀದಿಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲರಾಗಿಸುವ ಜೊತೆಗೆ ಬಡತನ ನಿರ್ಮೂಲನೆ ಉದ್ದೇಶದಿಂದ ಬಡವರ ಬಂಧು ಯೋಜನೆ ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಸಾಲ ಮಾರ್ಗಸೂಚಿಯಲ್ಲಿ ಬದಲಾವಣೆ ತಂದು ಯೋಜನೆ ಬಲಪಡಿಸಲು ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಗುರುತಿನ ಚೀಟಿ ವಿತರಿಸಲು ಯೋಜಿಸಲಾಗಿದೆ.

ಬೀದಿ ವ್ಯಾಪಾರಿಗಳಿಗೆ 2000 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಬಡ್ಡಿ ರಹಿತ ಅಲ್ಪಾವಧಿ ಸಾಲ ವಿತರಣೆ ಮಾಡಲಿದ್ದು, ದಿನದ ವ್ಯಾಪಾರ ಮುಗಿದ ಬಳಿಕ 100 ರೂಪಾಯಿಯಂತೆ 100 ದಿನದೊಳಗೆ ಸಾಲ ಮರುಪಾವತಿಸಬೇಕಿದೆ. ಮೀಟರ್ ಬಡ್ಡಿ ದಂಧೆ ಕಿರುಕುಳದಿಂದ ಬೀದಿ ಬದಿ ವ್ಯಾಪಾರಿಗಳನ್ನು ರಕ್ಷಿಸಲು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಡವರ ಬಂಧು ಯೋಜನೆ ಜಾರಿಗೆ ತಂದಿತ್ತು.

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ