ತಹಶಿಲದಾರ ಗ್ರಾಮಲೆಕ್ಕಿಗನ ಗಡಿಪಾರು, ಸರಕಾರಕ್ಕೆ ಮಹಾಪಾಪಿಯ ಪತ್ರ
ತಹಶಿಲದಾರ ಗ್ರಾಮಲೆಕ್ಕಿಗನ ಗಡಿಪಾರು, ಸರಕಾರಕ್ಕೆ ಮಹಾಪಾಪಿಯ ಪತ್ರ
ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲ್ಲೂಕು ಆಡಳಿತ ಕಡಿದು ಹಾಕಿದೆ
ಇದೆ ವಿಷಯಕ್ಕೆ ಸಂಬಂದಿಸಿದಂತೆ ತಹಶಿಲದಾರ ಮತ್ತು ಗ್ರಾಮಲೆಕ್ಕಿಗನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು, ಡಿಸಮಿಸ ಮಾಡಬೇಕು, ಹಾಗೂ ರೈತ ಮಹಿಳೆಗೆ ಆದ ನಷ್ಟದ ಹತ್ತರಷ್ಟು ಮರಳಿ ಕೊಡಬೇಕು ಮತ್ತು ಸರಕಾರ ರೈತ ಮಹಿಳೆಗೆ ಬಹಿರಂಗವಾಗಿ ಕ್ಷಮೆ ಕೆಳಬೆಕು ಎಂದು ಪತ್ರ ಬರೆದಿದೆ.
ಘಟನೆ ನಡೆದದ್ದು ಹಿಗೆ.
ಗುಬ್ಬಿ: ದೇವಸ್ಥಾನದ ಜಾತ್ರೆ ನಿಮಿತ್ತ ಒತ್ತುವರಿ ತೆರವು ಮಾಡಿಸಬೇಕೆಂದು ಗ್ರಾಮದ ಕೆಲವರು ಜಿಲ್ಲಾಧಿಕಾರಿಗೆ ಮಾಡಿದ್ದ ಮನವಿಯನ್ನೇ ಅಸ್ತ್ರವಾಗಿಸಿಕೊಂಡ ಅಧಿಕಾರಿಗಳು, ಫಸಲು ನೀಡುತ್ತಿದ್ದ ಸುಮಾರು 200 ಅಡಕೆ ಹಾಗೂ ತೆಂಗಿನ ಮರಗಳನ್ನು ಕಡಿಸುವ ಮೂಲಕ ದರ್ಪ ಮೆರೆದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಸಬ ಹೋಬಳಿ ತಿಪ್ಪೂರು ಗ್ರಾಮದ ಹೊಸಪಾಳ್ಯದಲ್ಲಿ ಶುಕ್ರವಾರ ಈ ಕೃತ್ಯ ನಡೆದಿದ್ದು, ಗ್ರಾಮಸ್ಥರ ಪ್ರತಿಭಟನೆ ಬಳಿಕ ಗ್ರಾಮಲೆಕ್ಕಿಗನನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ಹೊಸಪಾಳ್ಯದ ಉಡಸಲಮ್ಮ ದೇವಸ್ಥಾನದ ಜಾತ್ರೆ ಇದೇ 12ರಂದು ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಜಾತ್ರೆ ಆಚರಣೆಗೆ ಸ್ಥಳಾಭಾವವಿರುವುದರಿಂದ ದೇವಸ್ಥಾನದ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಆ ನಿಟ್ಟಿನಲ್ಲಿ ತಹಸೀಲ್ದಾರ್ ಎಂ. ಮಮತಾ ಅವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಕಂದಾಯ ನಿರೀಕ್ಷಕ ರಮೇಶ್ ಮತ್ತು ಗ್ರಾಮಲೆಕ್ಕಿಗ ಮುರಳಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ, ಗ್ರಾಮ ಲೆಕ್ಕಿಗರು ಮಾ.6ರಂದು ಶುಕ್ರವಾರ ಒತ್ತುವರಿ ಜಾಗ ತೆರವುಗೊಳಿಸುವ ಸಂದರ್ಭದಲ್ಲಿ ಸಿದ್ದಮ್ಮ ಎಂಬುವವರಿಗೆ ಸೇರಿದ 175 ಅಡಕೆ ಮರ ಮತ್ತು 25 ತೆಂಗಿನ ಮರಗಳನ್ನು ಕಡಿದು ಹಾಕಿಸಿದ್ದರು.
ಮರಗಳನ್ನು ಕಡಿದಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ಘಟನೆ ನಡೆದ ಸ್ಥಳದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನೆಯನ್ನು ಗುಬ್ಬಿ ತಾಲೂಕು ಕಚೇರಿ ಮುಂಭಾಗಕ್ಕೆ ಸ್ಥಳಾಂತರಿಸಿ, ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ರಾ ದೇ ಕಾರಭಾರಿ

Comments
Post a Comment