ಪೋಸ್ಕೊ ಅಯ್ದೆ ಅಡಿ BEO OUT
ಪೋಸ್ಕೊ ಕಾಯ್ದೆ ಅಡಿ BEO OUT
ಗದಗ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್ ಹಳ್ಳಿಗುಡಿ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಣಾಧಿಕಾರಿ ಹಳ್ಳಿಗುಡಿ ಅವರು ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಆರೋಪಿಸಿ ೯ನೇ ತರಗತಿ ಬಾಲಕಿಯೊಬ್ಬಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಫೆ. ೨೧ರಂದು ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಆಧರಿಸಿ ಶಿಕ್ಷಣ ಇಲಾಖೆ ಆಯುಕ್ತರು ನೀಡಿದ ವರದಿ ಪರಿಗಣಿಸಿ ಕೆಸಿಎಸ್ (ನಡತೆ) ನಿಯಮಗಳು ೧೯೬೬ ನಿಯಮ ೩(೧) (೩) ಉಲ್ಲಂಘಿಸಿದ ಆರೋಪದ ಮೇಲೆ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಆದೇಶ ಹೊರಡಿಸಿದ್ದಾರೆ.

Comments
Post a Comment