ನನ್ನ ಕೊನೆಯ ಪತ್ರ ಆದರೆ ಕೊನೆಯ ಸಾಲನ್ನು ತಪ್ಪದೇ ಓದಿ

ಅಲೋಕ ನಾಯಕ ರವರಿಂದ
*ನನ್ನ* *ಕೊನೆಯ* *ಪತ್ರ* ಕೊನೆಯ ಸಾಲನ್ನು ತಪ್ಪದೇ ಓದಿ

ನನಗೀಗ ೪೨ ವರ್ಷ ನಾನು ಎಮ್ ಬಿಬಿಎಸ್ ಮಾಡುತ್ತಿದ್ದಾಗಲೇ ನನ್ನ ತಂದೆ ತೀರಿ ಹೋದರು.ತಾಯಿ ಈಗ್ಗೆ ಒಂದು ವರ್ಷದ ಕೆಳಗೆ ನನ್ನನ್ನು ಅಗಲಿದ್ದಳು.ನನಗೊಬ್ಬ ತಂಗಿಯಿದ್ದಾಳೆ.ಹೆಂಡತಿ ಎರಡು ಮುದ್ದಾದ ಮಕ್ಕಳು.ನಾನು ಡಾಕ್ಟರ್ ಆದಮೇಲೆ ಎಲ್ಲವೂ ಚೆನ್ನಾಗಿಯೇ ನಡೆಯತಿತ್ತು. ಎದುರಿಗಿರುವ ಯಾವುದೇ ರೋಗಿಯನ್ನು ಅವನು ಬಡವ,ಶ್ರೀಮಂತ,ಮೇಲು ಕೀಳು ಅಸಹ್ಯ ಎಂದು ಯಾವತ್ತೂ ನನಗೆ ಅನ್ನಿಸುತ್ತಿರಲಿಲ್ಲ ನಾನು ಹಾಗಿರುದಕ್ಕೇನೆ ಇಂದು ನನ್ನಕುಟುಂಬ ಆರೋಗ್ಯವಾಗಿದೆ ಎಂದು ಭಾವಿಸಿದ್ದೆ. ಆದರೆ ಈ ಕೊರೋನ ಬಂದಮೇಲೆ ನನ್ನ ಕಣ್ಣೆದುರೇ ಎಷ್ಟೊಂದು ಜನರ ಸಾವು ಕಂಡೆ ಅವರನ್ನು ಮುಟ್ಟಲು ಕೂಡಸಾಧ್ಯವಾಗದ ಸ್ಥಿತಿ.ಆ ಭಗವಂತ ಇಷ್ಟೊಂದು ಕ್ರೂರಿಯಾದನೇ..? ಎಂದನಿಸುತಿತ್ತು.ಎಷ್ಟೊಂದು ಜನ ವೈದ್ಯರು ಶ್ರಮಿಸುತಿದ್ದರೂ ಹತೋಟಿಗೆಬಾರದ ಈ ವೈರಸ್ ಗೆ ರೋಸಿಹೋದೆ.
ಅಸ್ಪತ್ರೆಯಲ್ಲಿ ಅದೊಂದು ದಿನ ನನ್ನನ್ನು ಪರೀಕ್ಷಿಸಿಕೊಂಡೆ ಆಗ ಕೊರೋನ ಪಾಸಿಟಿವ್ ಇತ್ತು. ತಕ್ಷಣ ನನ್ನ ಹೆಂಡತಿ ಮಕ್ಕಳನ್ನು ಪರೀಕ್ಷಿಸಲಾಯಿತು ಅದರೆ ಅದೃಷ್ಟವಶಾತ್ ಅದು ನೆಗೆಟಿವ್ ಇತ್ತು ನಾನು ಹಾಸಿಗೆ ಹಿಡಿದೆ ವಾಸಿಯಾಗದೆ ಹೋಯಿತು ನಾನು ಬದುಳಿಯುವುದಿಲ್ಲ ಎಂಬುದು ಖಚಿತವಾಗಿಹೋಯಿತು.
ನನ್ನ ಮಕ್ಕಳನ್ನು ನೋಡಬೇಕೆಂದ ನನ್ನನ್ನು ಮನೆಗೆ ಕಳುಹಿಸಲಾಯಿತು ಆದರೆ ಗೇಟ್ ಮುಟ್ಟುವಂತಿಲ್ಲ ಒಳಗೆ ಹೋಗುವಂತಿಲ್ಲ,ಹೊರಗಿನಿಂದಲೇ ಕೂಗಿದೆ
ಆಗ ನಾನು ಬರುತಿದ್ದಂತೆ ಗೇಟಿನವರೆಗೆ ಓಡಿ ಬಂದು ಅಪ್ಪಿಕೊಳ್ಳುತಿದ್ದವರು ಇಂದು ಅಷ್ಟು ದೂರದಿಂದ ಅಳುತ್ತಲೇ ಕರೆಯುತಿದ್ದರು.
ಪ್ರತಿಕ್ಷಣ  ನಗುತ್ತಾ ಖುಷಿಯಿಂದ ಇಬ್ಬರ ಸೆಲ್ಫಿ ತಗೆಯುತಿದ್ದ ನನ್ನ ಹೆಂಡತಿ ಅಷ್ಟು ದೂರದಿಂದ ನನ್ನೊಬ್ಬ ಕೊನೆಯ ಫೊಟೊ ತಗೆಯುತಿದ್ದಾಗ ಕಣ್ಣಹನಿಗಳು ಅವಳ ಕ್ಯಾಮರಾದ ಮೇಲೆ ಬಿದ್ದು ನನ್ನ ಭಾವಚಿತ್ರವೂ ಕಾಣದಾಯಿತು ನನ್ನ ಹೃದಯ ಒಡೆದು ಚೂರಾಯಿತು.ಕೈಕಾಲುಗಳು ನಡುಗುತಿದ್ದವು.ಮಾತು ಮುಗಿದು ಹೋಗಿತ್ತು ಮೌನಕ್ಕೆ ಮಂಪರು ಬಂದಿತ್ತು.ಬಾಯಿಗೆ ಹಾಕಿದ್ದಮಾಸ್ಕ್ ಹಲವಾರುಬಾರಿ ಒದ್ದೆಯಾದಂತೆ ಇಂದು ಒದ್ದೆಯಾಗದೇ ಒಣಗಿಹೋಗಿತ್ತು.ಅವರಿಗೆ ನನ್ನ ಕೊನೆಯ ಟಾಟ ಹೇಳಿ
ಹೊರಟುಬಂದೆ.ಇದು ನನ್ನ ಕಥೆ. ನಾನೇಕೆ ಈ ಪತ್ರ ಬರೆದೆನೆಂದರೆ ಈ ವಿಶ್ವದಲ್ಲಿ ನನ್ನಂಥವರು ಬಹಳ ಜನ ಇದ್ದಾರೆ ಅವರಿಗೂ ಹೀಗಾಗದಿರಲಿ.ಎಂದು ನಾನು ಬಯಸುತ್ತೇನೆ.ತಮಗೆಲ್ಲರಿಗೂ ಕೈಮುಗಿದು ಬೇಡಿಕೊಳ್ಳುತ್ತೇನೆ.ದಯವಿಟ್ಟು.ಸ್ವಚ್ಚವಾಗಿರಿ,ಕಂಡಕಂಡದನ್ನು ತಿನ್ನಬೇಡಿ,ಅರ್ದಗಂಟೆಗೊಮ್ಮೆ ಕೈ ತೊಳೆಯಿರಿ,ಮನೆಯಿಂದ ಹೊರಬರಬೇಡಿ.ಗಂಜಿಕುಡಿದಾದರೂ ಬದುಕಿ ಬದುಕಿದ್ದರೆ ಏನಾದರೂ ಮಾಡಬಹುದು ನಾವೇ ಇಲ್ಲದಿದ್ದರೆ ಏನೂ ಇಲ್ಲ.ನಿಮಗ್ಯಾವುದೇ ಖಾಯಿಲೆ ಇದ್ದರೂ ಧೈರ್ಯವಾಗಿಬಂದು ವೈದ್ಯರನ್ನು ಕಾಣಿಜರಿ ಗುಣಮುಖರಾಗಿ.ನನ್ನ ಕುಟುಂಬ ಅನಾಥ ಆದ ಹಾಗೆ ತಾವು ಆಗಬೇಡಿ. ತಮಗೆ ಈ ಪತ್ರ ನೋಡಿ ದುಖಃ ಆದರೆ ಕ್ಷಮಿಸಿಬಿಡಿ ನನ್ನ ಹಾಗೆ ನಿಮಗಾಗಿ ದುಡಿಯುವವರಿಗಾಗಿ ಒಂದು ಷಭಾಶ್ ಹೇಳಿ ಪ್ಲೀಸ್ ಪ್ಲೀಸ್ ಮನೆಯಿಂದ ಹೊರಬರಬೇಡಿ
ನಾನಿನ್ನು ಹೋಗುತ್ತೇನೆ ಮರಳಿಬಾರದೂರಿಗೆ.
(ಒಬ್ಬ ವೈದ್ಯನ ಕುರಿತು ಕಲ್ಪಿಸಿ ಬರೆದ ಕಥೆ)

ಮಧುನಾಯ್ಕ.ಲಂಬಾಣಿ
ಬಸರಹಳ್ಳಿತಾಂಡ

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ