ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವೇ ಮಹಿಳೆಯೊಬ್ಬರ ಆಕ್ರಂದನ ಮುಗಿಲು ಮುಟ್ಟಿದೆ. ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿವೆ. ಜಿಲ್ಲಾಧಿಕಾರಿ ಆದೇಶವನ್ನೇ ಧಿಕ್ಕರಿಸಿದ ತಹಶೀಲ್ದಾರ್ ಮುಂದೆ ನಿಂತು ಸಿದ್ದಮ್ಮನವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿಸಿಹಾಕಿದ್ದಾರೆ. ತಾನು ಸಲಹಿದ ಫಲ ನೀಡುತ್ತಿದ್ದ ಮರಗಳು ಕಡಿದ್ದನ್ನು ನೋಡಿ ಸಿದ್ದಮ್ಮ ಮಕ್ಕಳು ಕಳೆದುಕೊಂಡಂತೆ ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ಮನಕಲುಕುವಂತಿವೆ. ವಿಡಿಯೋ ನೋಡಿ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಕೋಡಿಕೆಂಪಮ್ಮ ದೇವಾಲಯದ ಜಾತ್ರೆ ಇತ್ತು. ಆ ಜಾತ್ರೆ ನಡೆಯುವ ಜಾಗದ ಭೂಮಿ ವಿವಾದದಲ್ಲಿತ್ತು ಆ ಜಮೀನನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿಯ ಲೋಪದಿಂದಾಗಿ ಸಿದ್ದಮ್ಮ ಅವರ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ತಹಶೀಲ್ದಾರ್ ಕೂಡ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಮಹಿಳಾ ರೈತರೊಬ್ಬರ ತೋಟವನ್ನು ಧ್ವಂಸ ಮಾಡಲಾಗಿದೆ. ಕೋಡಿಕೆಂಪಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆ ನಡೆಯಬೇಕಿದ್ದ ಬೇರೆ ಸ್ಥಳದಲ್ಲಿ ಪರಿಶೀಲನೆ ಮಾಡುವ ಬದಲು ಸಿದ್ದಮ್ಮನವರ ತೋಟಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ.
ಇಂದು ಬೆಳಿಗ್ಗೆ ಸಿದ್ದಮ್ಮ ಅವರು ತೋಟಕ್ಕೆ ಹೋದ ಗುಬ್ಬಿ ತಹಶೀಲ್ದಾರ್ 170 ಅಡಿಕೆ ಗಿಡಗಳು ಮತ್ತು 25 ತೆಂಗಿನ ಮರಗಳನ್ನು ಕಡಿಸಿ ಹಾಕಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಾರೆ. ತಹಶೀಲ್ದಾರ್ ಧೋರಣೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.
ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕೆ ಬಿದ್ದಿರುವುದನ್ನು ನೋಡಿದ ಸಿದ್ದಮ್ಮ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಗೊಳೋ ಎಂದು ಕಣ್ಣೀರು ಕರೆಯುತ್ತಿದ್ದಾರೆ. ಗುಬ್ಬಿ ತಾಲೂಕು ತಹಶೀಲ್ದಾರ್ ಏಕಾಏಕಿ ತೋಟಕ್ಕೆ ಬಂದು ನಿರ್ದಯವಾಗಿ ಮರಗಳನ್ನು ಕಡಿಸಿರುವುದು ಆಕೆಯನ್ನು ಕೆರಳುವಂತೆ ಮಾಡಿದೆ. ಇನ್ನೊಂದೆಡೆ ತಪ್ಪು ಮಾಡಿ ತಹಶೀಲ್ದಾರ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ತಾಲೂಕು ದಂಡಾಧಿಕಾರಿ ಮತ್ತು ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗ ರೈತರಿಗೆ ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ. ರೈತರ ಬೆಳೆದ ಬೆಳೆಯನ್ನು ಅಧಿಕಾರಿಯೇ ಮುಂದೆ ನಿಂತು ಕತ್ತರಿಸಿಹಾಕಲು ಅನುವು ಮಾಡಿಕೊಟ್ಟಿದ್ದಾರೆ. ಆ ತಹಶೀಲ್ದಾರ್ ಗೆ ಮರಗಳನ್ನು ಕಡಿಸುವ ಮನಸ್ಸು ಹೇಗೆ ಬಂತು ಎಂದು ರೈತ ಕಿಡಿಕಾರಿದ್ದಾರೆ. ಆದರೆ ಇದುವರೆಗೂ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

Comments
Post a Comment