ಕಾರ್ಮಿಕರಿಗೆ ತೊಂದರೆಯಾದಲ್ಲಿ ರಾಜ್ಯಾದ್ಯಂತ ಆಜಾದ್ ಆಂದೋಲನ ಹೋರಾಟ

ಕೇವಲ ಶಾಹಿ ಅಷ್ಟೆ ಅಲ್ಲ ಮಹಾಮಾರಿ ಕೋರೊನಾ ರಜೆಗೆ ಸಂಬಂದಿಸಿದಂತೆ ರಜೆ ಘೋಷಿಸಲಾಗಿದೆ ವೇತನ ಸಹಿತ ರಜೆ ನೀಡಬೆಕು ಈ ರಜೆಯ ದಿನಗಳ ವೇತನ ನೀಡದಿದ್ದರೆ ಉಗ್ರ ಹೋರಾಟಕ್ಕೆ ವೇದಿಕೆ ಸಜ್ಜಾಗುವುದು
ಕಾರ್ಮಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ #ಶಾಹಿ #ಎಕ್ಸ್_ಪೋರ್ಟ್ ಕಾರ್ಖಾನೆ ಮಾಲೀಕರು!
ಸಿದ್ಧ ಉಡುಪು ತಯಾರಿಕಾ (ಗಾರ್ಮೆಂಟ್ಸ್) ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ ಆಡಳಿತ ವರ್ಗವು ಸರಕಾರದ ಆದೇಶವನ್ನೇ ಉಲ್ಲಂಘಿಸಿ ಉದ್ಧಟತನ ಮೆರೆದಿದೆ.
ರಾಜ್ಯ ಸರ್ಕಾರವು ಮಾರಕ ಕೊರೊನಾ ತಡೆಯುವ ಉದ್ದೇಶದಿಂದ ದಿನಾಂಕ 23.03.2020ರಂದು ಆದೇಶ ಹೊರಡಿಸಿ ರಾಜ್ಯದೆಲ್ಲೆಡೆ ಕಾರ್ಯಾಚರಿಸುತ್ತಿರುವ ಎಲ್ಲ ಕಾರ್ಖಾನೆಗಳಿಗೆ 31.03.2020 ರವರೆಗೆ ರಜೆ ಘೋಷಿಸಿದೆ.
ಈ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನವನ್ನು ಕಡಿತಗೊಳಿಸಬಾರದೆಂದು ಮತ್ತು ಕಾರ್ಮಿಕರನ್ನು ಯಾವುದೇ ಕಾರಣಕ್ಕೆ ಕೆಲಸದಿಂದ ವಜಾ ಮಾಡಬಾರದೆಂದೂ ಆದೇಶಿಸಿದೆ.
ಸರಕಾರದ ಆದೇಶವನ್ನು ಕಡೆಗಣಿಸಿ, ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ ಆಡಳಿತ ವರ್ಗವು, ಸ್ವಾರ್ಥ, ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿ ದಿನಾಂಕ 28.03.2020 ರವರೆಗೆ ಮಾತ್ರ ರಜೆಯನ್ನು ಘೋಷಿಸಿ, ಘೋಷಿತ ರಜಾದಿನಗಳನ್ನು ಮುಂದಿನ ಅವಧಿಯಲ್ಲಿ Comp-up ಮಾಡಿ ಕೊಡಬೇಕೆಂದೂ ತಾಕೀತು ಮಾಡಿದೆ.
ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ ಆಡಳಿತ ವರ್ಗದ ಈ ನಡೆ, ಕಾರ್ಮಿಕರ ಆರೋಗ್ಯದ ಬಗೆಗಿನ ನಿಷ್ಕಾಳಜಿ ಮತ್ತು ಬೇಜವಾಬ್ದಾರಿತನ ತೋರಿಸುತ್ತದೆ.
ಕಾರ್ಮಿಕರ ಹಿತ ಕಾಪಾಡಬೇಕಾದ ಸದರಿ ಕಂಪನಿಗೆ ತನ್ನ ಲಾಭವೇ ಮುಖ್ಯ ಆಗಿದೆಯೇ ಹೊರತು ಕಾರ್ಮಿಕರ ಆರೋಗ್ಯ ಮತ್ತು ಜೀವದ ಬಗ್ಗೆ ಕಿಂಚಿತ್ತು ಗೌರವ (ಬೆಲೆ)ಇಲ್ಲದಿರುವುದನ್ನು ಸೂಚಿಸುತ್ತದೆ.
ಸರಕಾರದ ಆದೇಶವನ್ನೇ ಧಿಕ್ಕರಿಸಿ, ಬಡ ಕಾರ್ಮಿಕರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿರುವ ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ ವಿರುದ್ಧ ಸಂಬಂಧಪಟ್ಟವರು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಕಾರ್ಮಿಕರ ಹಿತ ಕಾಪಾಡಬೇಕಿದೆ.

Comments
Post a Comment