ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ ಮಹಾಪಾಪಿ ಪತ್ರಿಕೆ ಪ್ರಧಾನ ಸಂಪಾದಕರಿಗೆ ಗದಗನಲ್ಲಿ ಅಪಾಯ, ಸಂಪಾದಕರಿಗೆ ರಕ್ಷಣೆ ನೀಡಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಮಹಾಪಾಪಿ ಪತ್ರಿಕೆಯ ಜಿಲ್ಲಾ ಸಂಪಾದಕರು ರಾ ದೇ ಕಾರಭಾರಿಯವರಿಗೆ ರಕ್ಷಣೆ ನೀಡುವಂತೆ ಹಾಗೂ ಅವರು ಸಲ್ಲಿಸಿದ ಕೆಲವು ಇಲಾಖೆಗಳ ಭ್ರಷ್ಟಾಚಾರದ ಕುರಿತ ದೂರಿನ ತನಿಖೆ ನಡೆಸುವಂತೆ ಇಂದಿನಿಂದ ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸಲಾಯಿತು. ಅದರಂತೆಯೆ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಗೂ ಶಿವಮೊಗ್ಗ ಜಿಲ್ಲಾ ಸಂಪಾದಕರಿಂದ ಮನವಿ ಸಲ್ಲಿಸಲಾಗಿತ್ತು ಆದರೆ ಮನವಿ ಸ್ವೀಕರಿಸಿದಾಗ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸ್ವೀಕೃತಿ ಮೊಹರು ನೋಡಿ ಹೌಹಾರಿಸುವಂತಾಯ್ತು. ನಾವಿನ್ನು ಒಂದು ತಿಂಗಳ ಹಿಂದೆ ಇದ್ದಿವಾ? ಅಥವಾ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು ಒಂದು ತಿಂಗಳ ಮುಂದಿದ್ದಾರಾ? ಎಂದು ಆಲೋಚಿಸುವಂತಾಗಿದೆ ಕಾರಣ ಇಂದು ಕೊಟ್ಟಂತಹ ಮನವಿಯನ್ನು ಸ್ವೀಕರಿಸಿದ ಸಿಬ್ಬಂದಿ ಒಂದು ತಿಂಗಳು ಮುಂದಿನ ದಿನಾಂಕ ನಮೂದಿಸಿದ್ದಾರೆ. ಇದೊಂದು ಚಿಕ್ಕ ಎಡವಟ್ಟು ಸರಿ ಆದರೆ ಮುಂದೆ ದೊಡ್ಡ ಎಡವಟ್ಟು ಮಾಡಿಕೊಂಡರೆ ಕಷ್ಟ ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಸದರಿ ಪ್ರಜರಣವನ್ನು ಗಮನಿಸಬೇಕಾಗಿ ವಿನಂತಿ. ರಾ ದೇ ಕಾರಭಾರಿ ...