ವಿಜಯಪುರ, ಗಾಂಧಿಚೌಕ್ ಠಾಣೆ ಸಿಪಿಐ #ರವೀಂದ್ರ_ನಾಯ್ಕೊಡಿ‌ ರವರಿಗೆ ಧನ್ಯವಾದ

 ವಿಜಯಪುರ, ಗಾಂಧಿಚೌಕ್ ಠಾಣೆ ಸಿಪಿಐ #ರವೀಂದ್ರ_ನಾಯ್ಕೊಡಿ‌ ರವರಿಗೆ ಧನ್ಯವಾದ



ಧನ್ಯವಾದಗಳು ಆರಕ್ಷಕರಿಗೆ.. #ಕಾನೂನಿನೊಂದಿಗೆ_ಮಾನವೀಯತೆ#

ಕಾನೂನು ರಕ್ಷಣೆ ಜೊತೆಗೆ ಮಾನವಿಯತೆಗೆ ಸಾಕ್ಷಿಯಾದರು ವಿಜಯಪುರದ ಗಾಂಧಿಚೌಕ್ ಠಾಣೆ ಪೊಲೀಸರು. ಜನತಾ ಕರ್ಫ್ಯೂ ಬಗ್ಗೆ ಮಾಹಿತಿ ಇಲ್ಲದ ಕೆಲ ಪ್ರಯಾಣಿಕರು ಇವತ್ತು ಬೆಳಿಗ್ಗೆ ಬೇರೆ ಬೇರೆ (ಶ್ರೀಶೈಲದಿಂದ ಹೆಚ್ಚಿನವರು) ಊರುಗಳಿಂದ ಬಸ್ ನಿಲ್ದಾಣದ ಬಳಿ ಬಂದಿದ್ದರು. ಒಂದು ಲೋಟಾ ನೀರು ಸಿಗದ ಪರಿಸ್ಥಿತಿಯಲ್ಲಿ ‌ಮಹಿಳೆಯರು,‌ ಮಕ್ಕಳು ಬಸ್ ನಿಲ್ದಾಣದ ಹೊರ ಭಾಗದಲ್ಲಿ ಕಾಯುತ್ತಿದ್ದರು. ಇದೇ ಮಾರ್ಗದಲ್ಲಿ ಸಿಟಿ ರೌಂಡ್ಸ್ ಹಾಕುತ್ತಿದ್ದ ಗಾಂಧಿಚೌಕ್ ಠಾಣೆ ಸಿಪಿಐ #ರವೀಂದ್ರ_ನಾಯ್ಕೊಡಿ‌ ಹಾಗೂ ಅವರ‌ ಚಾಲಕ‌ #ಸಿದ್ದುಬಿರಾದಾರ್‌‌ ಪ್ರಯಾಣಿಕರ ಸಂಕಷ್ಟ ತಿಳಿದು ಕೂಡಲೆ ತಮಗೆ ಪರಿಚಯಸ್ಥರ ಕ್ರೂಜರ್ ವಾಹನ ಕರೆಯಿಸಿ ಅವರನೆಲ್ಲ ಅವರವರ ಊರುಗಳಿಗೆ ತಲುಪಿಸಲು ತಿಳಿಸಿದ್ರು.  ‌ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯದಂತೆ ಚಾಲಕನಿಗೆ ಸೂಚಿಸಿದರು. ಮಾನವಿಯ ಕಾರ್ಯಕ್ಕೆ ಆರಕ್ಷಕರು ಸಾಕ್ಷಿಯಾದ್ರೆ, ಇದನ್ನು ವರದಿ ಮಾಡಲು ಹೋಗಿದ್ದ ನನಗೂ ಸಂತೃಪ್ತಿ ಭಾವ ಮೂಡಿತು.

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ