9 ಜಿಲ್ಲೆಗಳೊಂದಿಗೆ ನಾಳೆಯಿಂದ ಇಡೀ ರಾಜ್ಯ ಲಾಕ್ ಡೌನ್ ?

9 ಜಿಲ್ಲೆಗಳೊಂದಿಗೆ ನಾಳೆಯಿಂದ ಇಡೀ ರಾಜ್ಯ ಲಾಕ್ ಡೌನ್ ?

• ಇಂದು ಸಂಜೆ ವೇಳೆಗೆ ಮುಖ್ಯಮಂತ್ರಿಗಳಿಂದ ಘೋಷಣೆ
• ಕೊರೊನಾ ಬಗ್ಗೆ ರಾಜ್ಯ ಸರ್ಕಾರದ ದಿಟ್ಟ ಕ್ರಮ
• ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇರುವಂತೆ ಸಲಹೆ
• ಮನೆಯಿಂದ ಹೊರಗೆ ಬಂದು ತಿರುಗಾಡಿದರೆ ಬೀಳುತ್ತೆ ಕೇಸ್ !

ಬೆಂಗಳೂರು: ಮಾರಕ ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಈಗಾಗಲೇ ಘೋಷಿಸಿದಂತೆ ರಾಜ್ಯದ 9 ಜಿಲ್ಲೆಗಳೊಂದಿಗೆ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಲು ತಮ್ಮ ಸರ್ಕಾರ ನಿರ್ಧರಿಸಿದ್ದು. ಈ ಬಗ್ಗೆ ಸಂಜೆಯೊಳಗೆ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಲಾಕ್ ಡೌನ್ ಮಾಡಲು ಚರ್ಚಿಸಲಾಗಿದೆ. ಲಾಕ್ ಡೌನ್ ಮಾಡಿದ ತಕ್ಷಣ ಯಾವುದೇ ಸಾರಿಗೆ ಸೌಲಭ್ಯಗಳೂ ಇರೋದಿಲ್ಲ. ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಬೇಕಾಗುತ್ತೆ. ಆಟೋ ಸೇವೆಯೂ ಇರೋದಿಲ್ಲ. ಒಂಭತ್ತು ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತೆ. ನಾಳೆಯಿಂದಲೇ ಕರ್ಫ್ಯೂ ಜಾರಿಯಾಗಲಿದೆ. ಈ ವೇಳೆ ಯಾರೂ ಕೂಡ ಮನೆಯಿಂದ ಹೊರಗೆ ಓಡಾಡುವ ಹಾಗಿಲ್ಲ. ಒಂದು ದು ವೇಳೆ, ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಬಿಎಸ್ ವೈ ಎಚ್ಚರಿಸಿದ್ದಾರೆ.
ಇದೇ ವೇಳೆ, ತೀರಾ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ಅದನ್ನು ಹೊರತುಪಡಿಸಿದಂತೆ ಎಲ್ಲ ಸೇವೆಗಳನ್ನು ಬಂದ್ ಮಾಡಲಾಗುವುದು. ರಾಜ್ಯವನ್ನು ಕೊರೊನಾ ಹಾವಳಿಯಿಂದ ಸಂಪೂರ್ಣವಾಗಿ

ಮೋದಿ ವಿಡಿಯೋ ಕಾನ್ಫರೆನ್ಸ್..

ಇದೇ ವೇಳೆ, ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡೋ ಮೂಲಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಹಾವಳಿ ತಡಗಟ್ಟಲು ಸರ್ಕಾರ ತೆಗೆದುಕೊಂಡಿರೋ ಕ್ರಮಗಳನ್ನು ವಿವರಿಸಿದರು. ಅಲ್ಲದೆ, ಕೊರೊನಾ ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಮತ್ತು ಮನೆಗಳಿಂದ ಯಾರೂ ಕೂಡ ಆಚೆ ಬರಕೂಡದು ಎಂದು ಮನವಿ ಮಾಡಿದರು

#democratictv #democraticnews #webportal #television #democratic #tv #news #karnataka #Corona #Covid_19 #Karnataka #bsy #lookdown #narendramoodi #videoconfirence

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ