N95 ಮಾಸ್ಕ ಖರಿದಿಗೆ ಕೆಂದ್ರ ಅಡ್ಡಗಾಲು

N95 ಮಾಸ್ಕ ಖರಿದಿಗೆ ಕೆಂದ್ರ ಅಡ್ಡಗಾಲು

ಕೊರೊನಾ ಸೋಂಕಿತರ, ವೈದ್ಯರ ಸುರಕ್ಷತಾ ಸಲಕರಣೆ (PPE), N95 ಮಾಸ್ಕ್‌ಗಳು ಮತ್ತು ರೋಗಿಗಳ ವೆಂಟಿಲೇಟರ್‌ಗಳನ್ನು ರಾಜ್ಯಗಳ ಬದಲಿಗೆ ತಾನೇ ಖರೀದಿಸಿ ಪೂರೈಸುವುದಾಗಿ ಕೇಂದ್ರ ಸರ್ಕಾರ ಆದೇಶ ನೀಡಿರುವುದು ಖಂಡನೀಯ. ಅನಗತ್ಯವಾದ ಈ ವಿಳಂಬದಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ.

ಕೊರೊನಾ ಸೋಂಕಿತರ ವೈದ್ಯರು ಅತ್ಯಗತ್ಯವಾದ PPE, N95‌ ಮಾಸ್ಕ್ ಇಲ್ಲದೆ  ಪ್ರಾಣಭಯದಲ್ಲಿದ್ದಾರೆ. ಈ ಸಲಕರಣೆಗಳನ್ನು ಖರೀದಿಸದಂತೆ ರಾಜ್ಯ ಸರ್ಕಾರಗಳ ಕೈಕಟ್ಟಿ ಹಾಕಿರುವ ಕೇಂದ್ರ ಸರ್ಕಾರ, ತಾನೂ ಕೂಡಾ ತುರ್ತಾಗಿ ಖರೀದಿಸಿ ಪೂರೈಸದೆ ವೈದ್ಯರು- ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯಗಳ ಅಧಿಕಾರವನ್ನು‌ ಒಂದೊಂದಾಗಿ ಕಿತ್ತುಕೊಂಡು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲುಮಾಡಲು ಹೊರಟಿರುವ ಪ್ರಧಾನಿಯವರ ಸರ್ವಾಧಿಕಾರವನ್ನು ಪಕ್ಷಾತೀತವಾಗಿ ಖಂಡಿಸಬೇಕಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಂಗಿಗೆ ಬೀಳದೆ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿ, ಅನ್ಯಾಯದ ವಿರುದ್ಧ ದನಿ ಎತ್ತುವ ದಿಟ್ಟತನ ತೋರಬೇಕು.
#Covid_19

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ