ಮಹೇಂದ್ರ ಕುಮಾರ್ ಕೊಲೆಯಾಯ್ತಾ ?

https://mahapapikannada.blogspot.com/2020/04/blog-post_25.html
ಮಹೇಂದ್ರ ಕುಮಾರ್ ಕೊಲೆಯಾಯ್ತಾ ? 

ಹೀಗೊಂದು ಪ್ರಶ್ನೆ ಇಂದು ಸಾಮಾಜಿಕ ಮಾದ್ಯಮದಲ್ಲಿ ಹರಿದಾಡ್ತಾಯಿದೆ ಇದಕ್ಕೆ ಪುಷ್ಟಿ ಎಂಬಂತೆ ಕೆಲವೊಂದು ಕಮೆಂಟಗಳು ಕಣ್ಣಿಗೆ ಕಾಣಿಸುತ್ತಿವೆ, ನಮ್ಮ ಧ್ವನಿ ಫೇಸಬುಕ್ ಪೇಜ್ ನಲ್ಲಿ ದಿನಾಂಕ ೨೫/೦೪/೨೦೨೦ ರ ರಾತ್ರಿ ೧೦:೧೫ ಘಂಟೆಗೆ ಒಂದು ಪೋಸ್ಟ್ ಬರುತ್ತದೆ ಮಹೇಂದ್ರ ಕುಮಾರ ಕೊಲೆಯೋ - ಸಾವೋ, ಬಡಿಯುತ್ತಿದೆ ಕೊಲೆಯ ವಾಸನೆ ತನಿಖೆ ನಡೆಸಿದರೆ ಹೊರಬೀಳಲಿದೆ ಸತ್ಯಾ ಸತ್ಯತೆ. ಈ ಒಂದು ಪೋಸ್ಟ್ ಗೆ ಸಂಬಂಧಿಸಿದಂತೆ ನಾನು ರಾತ್ರಿ ೧:೨೨ ಘಂಟೆಗೆ ಕಮೆಂಟಗಳನ್ನು ಪರಿಶೀಲಿಸುತ್ತಿರುವಾಗ ಕಣ್ಣಿಗೆ ಬಿದ್ದ ಕಮೆಂಟಗಳನ್ನು ನೋಡುವಾಗ ಈ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ಸಿಗುತ್ತದೆ. ಈ ಕಾಮೆಂಟಗಳನ್ನೂ ವಿವರಿಸುತ್ತಾ ಅವುಗಳ ಸ್ಕ್ರೀನ್ ಶಾಟ್ ಗಳನ್ನೂ ಇಲ್ಲಿ ಅಳವಡಿಸುತ್ತೇನೆ. 
ಕಮೆಂಟ್ ; Ajju ZB Kalladka ಇವರು ಹೇಳುವಂತೆ ; ಎದೆ ನೋವಿನಿಂದ ರಾತ್ರಿ ಹನ್ನೆರಡು ಘಂಟೆಗೆ ಆಸ್ಪತ್ರೆಗೆ ಧಾಖಲಿಸಲಾಗಿತ್ತು. 
ಕಮೆಂಟ್ : ಸಲ್ಮಾನ್ ಸಲ್ಲು ಇವರು ಹೇಳುವಂತೆ ಕೆಲವೊಂದು ಕಿಡಿಗೇಡಿಗಳು ಮಾಡಿರುವ ಮಾತುಗಳೇ ಸಾಕು 
ಈ ಮೇಲಿನ ಎರಡೂ ಕಮೆಂಟಗಳಿಗಿಂತ ಭಿನ್ನವಾಗಿ ಈ ಕೆಳಗಿನ ಕಾಮೆಂಟ್ ಕೊಲೆಯಾಗಿದೆಯಾ ಅನ್ನೋದನ್ನು ಮತ್ತಷ್ಟು ಪುಷ್ಟಿ ನೀಡುತ್ತವೆ. 
ಕಮೆಂಟ್: Raishad Ali ಇವರು ಹೇಳುವಂತೆ ವ್ಯವಸ್ಥಿತ ಕೊಲೆಯಾಗಿರಬಹುದು ಎಂದು ಬಲವಾದ ಸಂಶಯ ಕಾಡುತ್ತಿದೆ ಅನ್ನೋ ಕಾಮೆಂಟ್ ಜೊತೆಗೆ ಇವರು ಒಂದು ಸ್ಕ್ರೀನ್ ಶಾಟ್ ಕಾಮೆಂಟ್ ಮಾಡಿರುತ್ತಾರೆ ಅದೇನಪ್ಪ ಅಂದರೆ Siddu Sidd Facebook ಹೆಸರಿನಿಂದ ಮಾಡಲಾದ ಬೆದರಿಕೆ "ಇವನ ಹುಟ್ಟು ...ಎಲ್ರಿಗೂ ಗೊತ್ತು ಇವನು ಬೀದಿ  ಹೆಂ ಹೆಣ ಆಗುವನು..... ಕಲಬೆರಕೆ ಗಂಜಿ ಗಿರಾಕಿ  ಒಬ್ಬ ಪ್ರಧಾನಿ ವಿರುದ್ಧ ಟೀಕಿಸುತ್ತಾನೆ ಇನ್ನು ಸ್ವಲ್ಪ ದಿನ ಆಮೀ ಈ ಪಾಪಿ ಇರಲ್ಲ ... ಐ ಮೋದಿ ಮಯಾದಿ ಪುರುಷೋತ್ತಮ" ಈ ರೀತಿಯಆ ಕಮೆಂಟ್ ಇರುವ ಸ್ಕ್ರೀನ್ ಶಾಟ್ ಅಳವಡಿಸಲಾಗಿದೆ. ಇದನ್ನು ನೋಡಿದಾಗ ಅನುಮಾನದ ಹುತ್ತ ಇನ್ನೂ ಆಳಕ್ಕೆ ಹೋಗುತ್ತದೆ. ಇಷ್ಟೇ ಅಲ್ಲದೆ 
ಕಮೆಂಟ್ Mast Mast ಹೆಸರಿನ ಫೇಸ್ಬುಕ್ ನಿಂದ ತನಿಖೆ ಆಗಬೇಕು ಎಂಬ ಕಮೆಂಟ್ ಜೊತೆಗೆ  ಒಂದು ಬೆದರಿಕೆಯ ಹಸ್ತಪ್ರತಿಯನ್ನು ಕಾಮೆಂಟ್ ಮಾಡಲಾಗಿದೆ ಹಸ್ತಾಕ್ಷರದಲ್ಲಿ ಇರುವ ಆ ಪ್ರತಿಯಲ್ಲಿ ಮಹೇಂದ್ರ ಕುಮಾರ್, ನಿಜಗುಣಾನಂದ್ ಸ್ವಾಮೀ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲಸ್ವಾಮಿ, ಪ್ರಕಾಶ್ ರಾಜ್, ಜ್ಞಾನಪ್ರಕಾಶ್ ಸ್ವಾಮೀ, ಚೇತನಕುಮಾರ್, ಬಿ ಟಿ ಲಲಿತ ನಾಯಕ್, ಮಹೇಶ್ ಚಂದ್ರ ಗುರು, ಭಗವಾನ್, ದಿನೇಶ್ ಅಮೀನ್, ಚಂದ್ರೇಶಕರ್ ಪಾಟೀಲ್, ಪುಂಡಿ ಗಣೇಶ್, ಅಗ್ನಿ ಶ್ರೀಧರ್, (ಕ್ರಮ ಸಂಖ್ಯೆ ಹೆಸರು ತಿಳಿಯುತ್ತಿಲ್ಲ ಬಂದ ಕಾರಟ್ ಅಂತ ಇರಭಹುದು) ಕುಮಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ, ಹೀಗೆ ಈ ಎಲ್ಲರ ಹೆಸರುಗಳು ಬರೆಯಲ್ಪಟ್ಟಿವೆ ಹಾಗೂ ನಿಮ್ಮನ್ನು ಎಲ್ಲಾ ಸಂಹಾರ ಮಾಡುತ್ತೀವಿ ಎಂದು ನಮೂದಿಸಲಾಗಿದೆ. 
ಈ ಮೇಲಿನ ಪತ್ರ ಬರೆದವರಾರು? ಮತ್ತು ಕಮೆಂಟ್ ಮಾಡಿದ ವ್ಯಕಿಯ ಬಳಿ ಈ ಪತ್ರ ಬಂದಿದ್ದು ಎಲ್ಲಿಂದ? ಅಥವಾ ಕಮೆಂಟ್  ಮಾಡಿದ ಫೇಸ್ ಬುಕ್ ಕಾರಣವಾ? ಕಾರಣ ಸದರಿ ಫೇಸ್ಬುಕ್ ಹೆಸರು ಮಸ್ತ್ ಮಸ್ತ್ ಎಂದು ನಮೂದಿಸಲಾಗಿದೆ ಇಲ್ಲಿ ಈ ಫೇಸ್ಬುಕ್ ಬಳಸುವವನ ವಿವರವಿಲ್ಲ. 








ಈ ಎಲ್ಲವನ್ನು ವೀಕ್ಷಿಸಿದಾಗ ಅನುಮಾನ ಇನ್ನೂ ಬಲವಾಗುತ್ತದೆ,
ಮಹೇಂದ್ರ ಕುಮಾರ್ ಸಾವು ಕೊಲೆಯಾ ? ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಮತ್ತು ಮಾನ್ಯ ಪೊಲೀಸ್ ಇಲಾಖೆ ಸದರಿ ಫೇಸ್ಬುಕ್ ಪೋಸ್ಟ್ ಮತ್ತು ಕಮೆಂಟಗಳನ್ನು ಪರಿಶೀಲಿಸಿ ಸತ್ಯಾಸತ್ಯತೆಗಳನ್ನು ಜನತೆಯ ಮುಂದಿಡಬೇಕು ಎಂದು ವಿನಂತಿ.   
ಸಂಪಾದಕರು; ಮಹಾಪಾಪಿ ಪತ್ರಿಕೆ 

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ